ನೀಲಗಿರಿ ಬೆಟ್ಟ ಪಶ್ಚಿಮ ಘಟ್ಟ ಒಂದು ಭಾಗ. ಇದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿಕೊಂಡಿದೆ. ಕನಿಷ್ಠ 24 ನೀಲಗಿರಿ ಪರ್ವತಗಳ ಶಿಖರಗಳು 2,000 ಮೀಟರ್ಗಳಷ್ಟು ಎತ್ತರದಲ್ಲಿದೆ. ಅತಿ ಎತ್ತರದ್ದು ದೊಡ್ಡಬೆಟ್ಟ 2,637 ಮೀಟರ್ ಎತ್ತರವಿದೆ. == ಹೆಸರಿನ ಮೂಲ == ನೀಲಗಿರಿ ಎಂಬ ಪದ , ಸಂಸ್ಕೃತದ ನೀಲ ಮತ್ತು ಗಿರಿ ಪದಗಳಿಂದ ಬಂದಿದೆ. ನೀಲಕುರಂಜಿ ಹೂವಿನಿಂದ ಈ ಹೆಸರು ಬಂದಿದೆ. == ಸಂರಕ್ಷಣೆ == ಯುನೆಸ್ಕೊ ವರ್ಲ್ಡ್ ನೆಟ್ವರ್ಕ್ ಆಫ್ ಬಯೋಸ್ಫಿಯರ್ ರಿಸರ್ವ್ಸ್ ಅಡಿಯಲ್ಲಿರುವ ಇದು ಭಾರತದ ಸಂರಕ್ಷಿತ ಜೈವಿಕ ನಿಕ್ಷೇಪಗಳಲ್ಲಿ ಒಂದು. == ನೀಲಗಿರಿಯಲ್ಲಿನ ಶಿಖರಗಳು == ಅತೀ ಎತ್ತರದ್ದು ದೊಡ್ಡಬೆಟ್ಟ (2,637 ಮೀಟರ್) ಕೋಲಾರಿಬೆಟ್ಟಾ: ಎತ್ತರ: 2,630 ಮೀಟರ್ (8,629 ಅಡಿ), ಹೆಕುಬಾ: 2,375 ಮೀಟರ್ (7,792 ಅಡಿ), ಕಟ್ಟಾದಡು: 2,418 ಮೀಟರ್ (7,933 ಅಡಿ) ಕುಲ್ಕುಡಿ: 2,439 ಮೀಟರ್ (8,002 ಅಡಿ). ದೇವಶಾಲಾ (ಎತ್ತರ: 2,261 ಮೀಟರ್ (7,418 ಅಡಿ)), ಹುಲಿಕಲ್ ದುರ್ಗ (ಎತ್ತರ: 562 ಮೀಟರ್ (1,844 ಅಡಿ) ಕೂನೂರ್ ಬೆಟ್ಟ (2,101 ಮೀಟರ್ (6,893 ಅಡಿ) == ==